Traditional Day Celebration in the College
ಕನಕದಾಸ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ದೀಪಾವಳಿ ಹಬ್ಬದ ಮುನ್ನಾ ದಿನ, ದಿನಾಂಕ 22-10-2022 ರಂದು ಭಾರತೀಯ ಸಾಂಪ್ರದಾಯಿಕ ಉಡುಗೆ, ತೊಡುಗೆ, ಹಳ್ಳಿ ಸೊಗಡಿನ ಆಹಾರ ಪದಾರ್ಥಗಳ ಪ್ರದರ್ಶನ , ಸಾಮೂಹಿಕ ಭೋಜನ ಹಾಗೂ ಗ್ರಾಮೀಣ ಒಡಪುಗಳು, ಒಗಟುಗಳನ್ನು ಒಳಗೊಂಡ ಮನರಂಜನೆ ಕಾರ್ಯಕ್ರಮಗಳಿಂದ ಕೂಡಿದ ಜನಪದ ಮೇಳವನ್ನು ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷರಾದ ಡಾ.ಎನ್.ಎಸ್.ಜಾಧವ ಅವರ ನೇತೃತ್ವ ಹಾಗೂ ನಿರ್ದೇಶನದಲ್ಲಿ ಆಯೋಜಿಸಲಾಗಿತ್ತು.ಕಾರ್ಯಕ್ರಮವು ವಿಧಾನ ಪರಿಷತ್ ನ ಮಾಜಿ ಸದಸ್ಯರಾಗಿದ್ದ ದಿವಂಗತ ಶ್ರೀ ಗವಿಸಿದ್ಧಪ್ಪ ಬೆಳವಡಿ ಅಜ್ಜನವರ ಭಾವ ಮೂರ್ತಿಗೆ ಪೂಜೆ ಸಲ್ಲಿಸುವುದರ ಮೂಲಕ ಆರಂಭವಾಯಿತು. ಪ್ರಾಚಾರ್ಯರಾದ ಡಾ.ಬಿ.ಜಿ.ಧಾರವಾಡ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ IQAC ಹಾಗೂ NAAC ಸಂಯೋಜಕರಾದ ಡಾ.ಎಸ್.ಎ.ನರಸಗೌಡ, ಪ್ರಶಿಕ್ಷಣಾರ್ಥಿ ಪರಿಷತ್ ಕಾರ್ಯಾಧ್ಯಕ್ಷರಾದ ಡಾ.ಎಂ.ಆರ್.ಭಟ್ಟ, ಉಪಾಧ್ಯಕ್ಷರಾದ ಪ್ರೊ.ಡಿ.ಎಚ್.ನಾಯ್ಕ್,NSS ಸಂಯೋಜಕರಾದ ಡಾ.ಜಿ.ಆರ್.ಕೋಟೆಣ್ಣವರ, ಡಾ.ಎನ್.ಎ.ಪೂಜಾರಿ, ಹಾಗೂ ಸಿಬ್ಬಂದಿ ಶ್ರೀ ಮಲ್ಲೇಶಿ ಕುಂದರನಾಡ ಮತ್ತು ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.

Traditional Day Celebration in the College