ರಾಷ್ಟ್ರೀಯ ಸಂವಿಧಾನ ದಿನಾಚರಣೆ

ಕನಕದಾಸ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ಕಾಲೇಜಿನ ಮತದಾರರ ಜಾಗೃತಿ ವೇದಿಕೆ ಹಾಗೂ ಚುನಾವಣಾ ಸಾಕ್ಷರತಾ ಕ್ಲಬ್ ಅಡಿಯಲ್ಲಿ "ರಾಷ್ಟ್ರೀಯ ಸಂವಿಧಾನ ದಿನಾಚರಣೆ"ಸಮಾರಂಭವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಬೆಳಗಾವಿಯ ಎಸ್.ಎಸ್.ಸಮಿತಿಯ ಮಹಾವೀರ ಪಿ .ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಪ್ರೊ.ರವಿ.ಎಸ್.ದಂಡಗಿ ಇವರು ಆಗಮಿಸಿದ್ದರು.ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಎಲ್.ಪಾಟೀಲ ಇವರು ವಹಿಸಿದ್ದರು.ಸಂವಿಧಾನದ ರಚನೆ, ಮಹತ್ವ, ಸಂವಿಧಾನ ಅನುಸರಣೆ, ಚುನಾವಣೆ, ಮತದಾನ, ಚುನಾವಣಾ ಸಾಕ್ಷರತೆ, ಮತದಾರರ ಜಾಗೃತಿ ,ಪೂರ್ಣಮತದಾನದ ಮಹತ್ವ , ಮತದಾರರ ಕರ್ತವ್ಯ ಮುಂತಾದ  ವಿಷಯಗಳ ಕುರಿತು ಪ್ರಾಧ್ಯಾಪಕರು ಹಾಗೂ  ಪ್ರಶಿಕ್ಷಣಾರ್ಥಿಗಳು ಮಾತನಾಡಿದರು.

 

 

ಕರ್ನಾಟಕ ಇತಿಹಾಸ ಅಕಾಡೆಮಿ ಬೆಂಗಳೂರು ಹಾಗೂ ಕನಕದಾಸ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದ ಇತಿಹಾಸ ಸಂಘದಡಿಯಲ್ಲಿ ಐತಿಹಾಸಿಕ ಪರಂಪರೆ ಉಳಿಸಿ , ಸ್ಮಾರಕಗಳನ್ನು ರಕ್ಷಿಸಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಜಾಗ್ರತಿ ಕಾರ್ಯಕ್ರಮಗಳು ಇಂದು ದಿನಾಂಕ 18-10-2019 ರಿಂದ 20-10-2019 ವರೆಗೆ ಶಿವಮೊಗ್ಗ ದ ಶ್ರೀ ಕ್ಷೇತ್ರ ಹೊಂಬುಜ ಜೈನಮಠದಲ್ಲಿ ಜರುಗುತ್ತಿರುವ ಕರ್ನಾಟಕ ಇತಿಹಾಸ ಅಕಾಡೆಮಿಯ 33 ನೇ ವಾರ್ಷಿಕ ಮಹಾಸಮ್ಮೇಳನದಲ್ಲಿ ಬಿಡುಗಡೆಯಾದ ಇತಿಹಾಸ ದರ್ಶನ 2019 ಸಂಪುಟ 34 ರಲ್ಲಿ ನಮ್ಮ ಕಾಲೇಜಿನ ಕಾರ್ಯಕ್ರಮಗಳು ಪ್ರಕಟಗೊಂಡಿವೆ. ಇದಕ್ಕಾಗಿ ಪ್ರಾಚಾರ್ಯರು, ಪ್ರಾಧ್ಯಾಪಕರು,ಪ್ರಶಿಕ್ಷಣಾರ್ಥಿಗಳಿಗೆ ಇತಿಹಾಸ ಸಂಘದ ಪರವಾಗಿ ಅಭಿನಂದನೆಗಳು.

ಕನಕದಾಸ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ದಿನಾಂಕ 1-11-2019 ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸತಿ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಸಮಾರಂಭದಲ್ಲಿ ಪ್ರಾಚಾರ್ಯರಾದ ಡಾ.ಎ.ಎಲ್.ಪಾಟೀಲ ಇವರು ನಾಡದೇವಿ ಭುವನೇಶ್ವರಿ ದೇವಿಗೆ ಪೂಜೆ ನೆರವೇರಿಸಿ ಮಾತನಾಡಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಡೆಯುತ್ತಿರುವ ಕನ್ನಡ ರಾಜ್ಯೋತ್ಸವದ ಸಮಾರಂಭಗಳು ಇಡೀ ರಾಜ್ಯದ ಗಮನ ಸೆಳೆಯುತ್ತವೆ.ಇದು ಬೆಳಗಾವಿಗರು ಹೆಮ್ಮೆ ಪಡುವ ವಿಷಯ ಹಾಗಾಗಿ ನಾವೆಲ್ಲರೂ ಅಭಿಮಾನದಿಂದ ಕನ್ನಡದ ಉತ್ಸವದಲ್ಲಿ ಭಾಗಿಯಾಗಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು, ಶಿಕ್ಷಕರು, ಪ್ರಶಿಕ್ಷಣಾರ್ಥಿಗಳು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಕನಕದಾಸ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ದಿನಾಂಕ 31-10-2019 ರಂದು ಸ್ವತಂತ್ರ ಭಾರತದ ಮೊದಲ ಉಪ ಉಪಪ್ರಧಾನಿ ಉಕ್ಕಿನ ಮನುಷ್ಯ ಭಾರತ ರತ್ನ "ಸರ್ದಾರ್ ವಲ್ಲಭಭಾಯ್ ಪಟೇಲ್ "ಅವರ 144 ನಾವೇ ಜನ್ಮ ಜಯಂತಿ ನಿಮಿತ್ತ "ರಾಷ್ಟ್ರೀಯ ಏಕತಾ ದಿನಾಚರಣೆ ಹಾಗೂ ಏಕತೆಗಾಗಿ ಓಟ" ಸಮಾರಂಭವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಬೆಳಗಾವಿಯ ಬೆನನ್ ಸ್ಮಿತ್ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕರು,ಸಾಹಿತಿಗಳೂ ಆದ ಪ್ರೊ.ಶ್ರೀಕಾಂತ ಶಾನವಾಡ ಇವರು ಆಗಮಿಸಿ ಮಾತನಾಡಿ ಸರ್ದಾರ್ ವಲ್ಲಭಭಾಯ್ ಪಟೇಲ್ ರವರ ಜೀವನ, ಸಾಧನೆ ಹಾಗೂ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅವರು ವಿಶೇಷವಾಗಿ ಗುರುತಿಸಿಕೊಂಡಿರುವ ಅವರ ರಾಜಕೀಯ ಜೀವನ ದ ಕೌತುಕಗಳನ್ನು ಮಾರ್ಮಿಕವಾಗಿ ಮಾತನಾಡಿದರು."ರಾಷ್ಟ್ರೀಯ ಏಕತೆ ಕುರಿತು ಪ್ರತಿಜ್ಞಾ ವಿಧಿ "ಸ್ವೀಕರಿಸಲಾಯ್ತು. ಪ್ರಾಚಾರ್ಯರಾದ ಡಾ.ಎ.ಎಲ್.ಪಾಟೀಲ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಪ್ರಾದ್ಯಾಪಕರು, ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

ಕನಕದಾಸ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಜ್ಯ ಚುನಾವಣಾ ಆಯೋಗದ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಇವುಗಳ ನಿರ್ದೇಶನದ ಮೇರೆಗೆ ಕಾಲೇಜಿನ "ಮತದಾನ (ಚುನಾವಣಾ)ಸಾಕ್ಷರತಾ ಸಂಘ ಹಾಗೂ ಮತದಾರರ ಜಾಗೃತಿ ವೇದಿಕೆ" ಇವುಗಳ ಅಡಿಯಲ್ಲಿ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗ ಹಾಗೂ ಪ್ರಶಿಕ್ಷಣಾರ್ಥಿಗಳಿಗಾಗಿ " ಮತದಾರರ ಪರಿಶೀಲನೆ "ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಅರ್ಹರು ಮತದಾರರ ಆಗುವ ಹಾಗೂ ಮತದಾರರು ನೂತನ ಕಾರ್ಡ್ ಹೊಂದುವ ಪ್ರಕ್ರಿಯೆ ಕುರಿತು ಮಾಹಿತಿ ನೀಡಲಾಯಿತು.ಅದ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ.ಎ.ಎಲ್.ಪಾಟೀಲ ಇವರು ವಹಿಸಿದ್ದರು.

ಕನಕದಾಸ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ದಿನಾಂಕ:07-11-2019 ರಂದು ಭೌತವಿಜ್ಞಾನ ವಿಷಯದಲ್ಲಿ ಏಷಿಯಾ ಖಂಡದ ಪ್ರಥಮ ನೋಬೆಲ್ ಪ್ರಶಸ್ತಿ ಪುರಸ್ಕೃತ ಭಾರತರತ್ನ ಡಾ.ಸಿ.ವಿ.ರಾಮನ್ ರವರ 131 ನೇ ಜನ್ಮದಿನಾಚರಣೆ ಸಮಾರಂಭವನ್ನು ಆಯೋಜಿಸಲಾಗಿತ್ತು . ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ.ಎ.ಎಲ್.ಪಾಟೀಲ ಇವರು ವಹಿಸಿದ್ದರು.