Teachers Day Celebration
ಕನಕದಾಸ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆಯ ಸಮಾರಂಭ ಯೋಗಾ ಯೋಗ ಎಂಬಂತೆ ನಮಗೆಲ್ಲರಿಗೂ ಅತ್ಯಂತ ಸಂತೋಷ,ಹೆಮ್ಮೆ ಹಾಗೂ ಅಭಿಮಾನದ ಕ್ಷಣಗಳಿಗೆ ಸಾಕ್ಷಿಯಾಯಿತು.ಕಾರಣ ಪ್ರಥಮವಾಗಿ ಪ್ರಾಧ್ಯಾಪಕರು,ಕನಕದಾಸ ಶಿಕ್ಷಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷರು, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಳಗೊಂಡು ಹಲವಾರು ಪ್ರಶಸ್ತಿಗಳ ಪುರಸ್ಕೃತರು ಆಗಿರುವ ಡಾ.ಬಿ.ಎಫ್.ದಂಡಿನ ಸರ್ ಇವರು ನಮ್ಮ ಕಾರ್ಯಕ್ರಮಕ್ಕೆ ಆಗಮಿಸಿ ಶಿಕ್ಷಕರ ದಿನಾಚರಣೆ ಸಮಾರಂಭವು ಅರ್ಥಪೂರ್ಣವಾಗಿ ಸಂಭ್ರಮದಿಂದ ಜರಗಿತು.ಇನ್ನೂ ವಿಶೇಷ ಎಂಬಂತೆ ಕನಕದಾಸ ಶಿಕ್ಷಣ ಸಮಿತಿಯ ಜಂಟಿ ಕಾರ್ಯದರ್ಶಿಗಳಾದ ಡಾ.ಪುನೀತಕುಮಾರ ಬೆನಕನವಾರಿ ಇವರು ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ ಕನಕದಾಸ ಶಿಕ್ಷಣ ಸಮಿತಿಯು ಹಲವು ಶಿಕ್ಷಣ ಸಂಸ್ಥೆಗಳನ್ನು ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಸ್ಥಾಪಿಸುವುದರೊಂದಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರತಿಷ್ಠಿತ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದಕ್ಕೆ ಸಾಕ್ಷಿಯಾಗಿರುವವರು ಅಜ್ಜನವರಾದ ಮಾನ್ಯಸಂಸ್ಥಾಪಕ ಅಧ್ಯಕ್ಷರಾದ ಡಾ.ಬಿ.ಎಫ್.ದಂಡಿನ ರವರ ಪರಿಶ್ರಮದ ಫಲವಾಗಿದೆ.ಇಂಥ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು,ಸೇವೆ ಗೈಯುತ್ತಿರುವ ಶಿಕ್ಷಕರು, ಸಿಬ್ಬಂದಿ ಧನ್ಯರು.ಮಾನ್ಯ ಅಧ್ಯಕ್ಷರು ಶ್ರಮ ಪಟ್ಟು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಶಿಕ್ಷಣ ಪಡೆದು ಸದ್ವಿನಿಯೋಗ ಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ನಂತರ ಮಾನ್ಯ ಅಧ್ಯಕ್ಷರು ನಮ್ಮೆಲ್ಲರನ್ನು ಉದ್ದೇಶಿಸಿ ಮಾತನಾಡಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡುವಾಗ ಎದುರಾದ ಸಮಸ್ಯೆಗಳು, ಅನುಭವಿಸಿದ ಕಷ್ಟಗಳನ್ನು ಮೆಲುಕು ಹಾಕಿ ಆತ್ಮವಿಶ್ವಾಸದಿಂದ ಎಲ್ಲವನ್ನು ಎದುರಿಸಿದಾಗ ಮಾತ್ರ ಒಬ್ಬ ವ್ಯಕ್ತಿ ಒಂದು ಶಕ್ತಿಯಾಗಿ ಶಿಕ್ಷಣ ಸಂಸ್ಥೆ ಸ್ಥಾಪಿಸಬಲ್ಲ ಎಂದು ಹೇಳುತ್ತಾ ಒಬ್ಬ ಸಾಮಾನ್ಯ ಮಹಿಳೆ ಹಿಂದುಳಿದ ಪ್ರದೇಶ ಹಾಗೂ ಬುಡಕಟ್ಟು ಜನಾಂಗದಿಂದ ಬಂದು ನಮ್ಮ ದೇಶದ ಪ್ರಸ್ತುತ ಮಾನ್ಯ ರಾಷ್ಟ್ರಪತಿಯಾಗಿರುವ ಶ್ರೀಮತಿ ದ್ರೌಪದಿ ಮುರ್ಮು ಅವರ ಜೀವನ ಸಾಹಸಗಾಥೆಯಂತೆ ನನ್ನ ಜೀವನವೂ ನಡೆದು ಬಂದಿದೆ ಎಂದು ತಿಳಿಸಿದರು.ವೇದಿಕೆಯ ಮೇಲೆ ಕುಮಾರ ಸಂಕೇತ ದಂಡಿನ, ಶ್ರೀ ಗವಿಸಿದ್ಧಪ್ಪ ಗವೆಪ್ಪ ಬೆಳವಡಿ ಮಮೋರೇಬಲ್ ಫೌಂಡೇಶನ್ ಅಧ್ಯಕ್ಷರಾದ ಕುಮಾರಿ ಅಶ್ವಿನಿ ಬೆಳವಡಿ ಇವರು ಉಪಸ್ಥಿತರಿದ್ದರು.ಆರಂಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ.ಬಿ.ಜಿ.ಧಾರವಾಡ ಇವರು ಸರ್ವರನ್ನು ಸ್ವಾಗತಿಸಿದರು.ಸಮಾರಂಭದಲ್ಲಿ ಎಲ್ಲಾ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಮತ್ತು ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.ಕೊನೆಯಲ್ಲಿ ಪ್ರೊ.ಡಿ.ಎಚ್.ನಾಯ್ಕ್ ವಂದನಾರ್ಪಣೆ ಮಾಡಿದರು.
Teachers Day Celebration