ಕನಕದಾಸ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ಕಾಲೇಜಿನ ‘Voting Awareness Forum(VAF) & Electoral Literacy Club (ELC)’ ಗಳ ಅಡಿಯಲ್ಲಿ “ಮತದಾನ ಜಾಗೃತಿ ಕಾರ್ಯಕ್ರಮ”(Voting Awareness Programme) ವನ್ನು ಹಮ್ಮಿಕೊಳ್ಳಲಾಗಿತ್ತು.ಪ್ರಾದ್ಯಾಪಕರಾದ ಡಾ.ಬಿ.ಜಿ.ಧಾರವಾಡ ಮಾತನಾಡಿ ಸದ್ಯ ಚುನಾವಣೆಗಳು ಘೋಷಣೆಯಾದ ಹಿನ್ನೆಲೆಯಲ್ಲಿ ಮತದಾನವು ರಾಷ್ಟ್ರೀಯ ಮಹತ್ವವಾಗಿದ್ದು ಅರ್ಹ ಮತದಾರರೆಲ್ಲರೂ ಕಡ್ಡಾಯವಾಗಿ ಮತದಾನ ಮಾಡುವುದು,ಮತದಾನದ ಪ್ರಮಾಣವನ್ನು ಹೆಚ್ಚಿಸುವಲ್ಲಿ ನಮ್ಮೆಲ್ಲರ ಪಾತ್ರ ಪ್ರಮುಖವಾಗಿದೆ.ಹೊಣೆಯರಿತು ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಹಾಗೂ ನಮ್ಮ ಸುತ್ತಮುತ್ತಲಿನವರಲ್ಲಿ ಜಾಗ್ರತಿ ಮೂಡಿಸುವ ಉದ್ದೇಶದಿಂದ ಇಂಥ ಕಾರ್ಯಕ್ರಮಗಳು ನಮ್ಮಲ್ಲಿ ಅರಿವನ್ನು ಮೂಡಿಸಲು ನೆರವಾಗುತ್ತವೆ ಎಂದು ಮಾತನಾಡಿದರು. NAAC &IQAC ಸಂಯೋಜಕರಾದ ಡಾ.ಎಸ್.ಎ.ನರಸಗೌಡ ಮಾತನಾಡಿ ಮತದಾನದ ಮಹತ್ವ ಹಾಗೂ ಅರ್ಹರು ಮತದಾರಾಗುವ ಪ್ರಕ್ರಿಯೆ ಯೊಂದಿಗೆ ಎಲ್ಲರೂ ಕಡ್ಡಾಯವಾಗಿ ಮತದಾನವನ್ನು ಮಾಡುವಂತೆ ತಿಳಿಸಿದರು.ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ.ಎ.ಎಲ್.ಪಾಟೀಲ ವಹಿಸಿ ಮಾತನಾಡಿ ಮತದಾನದ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತು ಮತದಾನ ಮಾಡಲು ಕರೆ ನೀಡಿದರು.ಪ್ರಶಿಕ್ಷಣಾರ್ಥಿಗಳಾದ ಶ್ರುತಿಕಾ ಪಾಟೀಲ ಸರ್ವರನ್ನು ಸ್ವಾಗತಿಸಿದರು , ಅಶ್ವಿನಿ ನಿಂಬಾಳ್ಕರ್ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸತಿ ಪ್ರೌಢಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.