ಕನಕದಾಸ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ದಿನಾಂಕ 29-12-2020 ರಂದು ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ರಾಷ್ಟ್ರಕವಿ, ಕರ್ನಾಟಕ ರತ್ನ, ಅಲ್ಲದೇ ಹಲವಾರು ಪ್ರಶಸ್ತಿ ಹಾಗೂ ಪುರಸ್ಕಾರಗಳಿಗೆ ಭಾಜನರಾದ ಮನುಜಮತ ವಿಶ್ವಪಥ ವೆಂದು “ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ ಕನ್ನಡವೇ ನಿತ್ಯ” ಎಂದು ಸಾರಿದ ವಿಶ್ವಮಾನವ ಸಂದೇಶದ ಕನ್ನಡ ಸಾರಸ್ವತ ಲೋಕದ ಕವಿ, ಕಾದಂಬರಿಕಾರ, ಅದ್ಬುತ ಮಹಾಕಾವ್ಯದ ಸಾಹಿತಿ” ಕುವೆಂಪು” ಅವರ ಜನ್ಮದಿನದ ನಿಮಿತ್ತ “ವಿಶ್ವಮಾನವ ದಿನಾಚರಣೆ”ಯ ಸಮಾರಂಭ ಜರುಗಿತು.ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ.ಎ.ಎಲ್.ಪಾಟೀಲ ಇವರು ವಹಿಸಿದ್ದರು.ಪ್ರಶಿಕ್ಷಣಾರ್ಥಿಗಳು ಕುವೆಂಪು ಅವರು ರಚಿಸಿದ ಗೀತೆ ಗಾಯನ ಪ್ರಸ್ತುತ ಪಡಿಸಿದರು. ಪ್ರಾದ್ಯಾಪಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.