ಬಡವರ ಬಂಧು, ದೀನ ದಲಿತರ ಉದ್ಧಾರಕರು, ಹಿಂದುಳಿದ ಜನಾಂಗಗಳ ಬಗೆಗೆ ಅಪಾರ ಕಾಳಜಿಯ, ಬೆಳಗಾವಿ, ಹುಬ್ಬಳ್ಳಿ- ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ 68 ಕ್ಕಿಂತ ಹೆಚ್ಚು ಶಿಕ್ಷಣ ಸಂಸ್ಥೆಗಳ ಸ್ಥಾಪನೆಯ ರೂವಾರಿಗಳು, ರಾಜಕೀಯ ನೇತಾರರು, ಗೌರವ ಡಾಕ್ಟರೇಟ್ ಪುರಸ್ಕೃತ, ಕನಕದಾಸ ಶಿಕ್ಷಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ನಮ್ಮೆಲ್ಲರ ಹೆಮ್ಮೆಯ, ಸ್ಪೂರ್ತಿದಾಯಕ ವ್ಯಕ್ತಿತ್ವದ ಶಿಕ್ಷಣ ಪ್ರೇಮಿಗಳಾದ ಮಾನ್ಯ ಡಾ.ಬಿ.ಎಫ್.ದಂಡಿನ ಸರ್ ಇವರು ಪ್ರಸ್ತುತ ಸಾಲಿನ ಕರ್ನಾಟಕ ಸರ್ಕಾರದ ಅತ್ಯುನ್ನತ ಪ್ರಶಸ್ತಿ “ಕನ್ನಡ ರಾಜ್ಯೋತ್ಸವ ಪ್ರಶಸ್ತಿ” ಗೆ ಭಾಜನರಾಗಿರುವುದಕ್ಕೆ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು, ಪ್ರಾದ್ಯಾಪಕರು, ಸಿಬ್ಬಂದಿ ಹಾಗೂ ಎಲ್ಲ ಪ್ರಶಿಕ್ಷಣಾರ್ಥಿಗಳಿಂದ ಅವರಿಗೆ ನಮ್ಮ ಸಂಸ್ಥೆ, ನಮ್ಮ ಹೆಮ್ಮೆಯ ಮಾನ್ಯರಿಗೆ ಹಾರ್ದಿಕ ಅಭಿನಂದನೆಗಳು.