Krantiveer Sangolli Rayanna College of Education

News & Events

Dr. B. R. Ambedkar Jayanti Celebration

ಕನಕದಾಸ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ಸಂವಿಧಾನ ಶಿಲ್ಪಿ , ಮಹಾಮಾನವತಾವಾದಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಮೂರ್ತಿಗೆ ಪೂಜೆ ಸಲ್ಲಿಸುವುದರ ಮೂಲಕ ಅವರ 130 ನೇ ಜನ್ಮಜಯಂತಿ ಕಾರ್ಯಕ್ರಮ ಜರುಗಿತು.Voting Awareness Forum(VAF) & Electoral Literacy Club (ELC)

Read More...
Inauguration of B.Ed Theory Classes for 1st & 4th Semester

Read More...
Guruvandana & Social Gathering: A Re-visit to the Memory of Golden Past

Kanakadasa Shikshana Samiti’s Krantiveer Sangolli Rayanna College of Education, Belagavi: IQAC And Alumni Association of 2000-2001 Batch Organized “Guruvandana & Social Gathering: A Re-visit to the Memory of Golden Past” on 7th March  2021 in the college. Secretary of K. S. Samiti, Shri. Ravi B. Dandin presided over the function and appreciated the alumni for returning to the college after 20 years to pay respect to the teachers & acknowledge the contributions of the college in their career.

Read More...


Guest lecture on "Awareness of Road Safety and Traffic Rules"
Kanakadasa Shikshana Samiti's Krantiveer Sangolli Rayanna College of Education, Belagavi: College IQAC And Traffic Police Department Belagavi organised on 02-02-2021, Awareness Jatha and Special guest lecture on "Awareness of Road Safety and Traffic Rules" on the occasion of "National Road Safety Month". Guest lecture by Shri Sharanappa, ACP City Traffic Police Station Belagavi. Principal Dr. A. L. Patil sir presided over the programme, Faculty and students were presented on the occasion. And with slogans of the traffic rules by the students the Awareness Jatha was started from college and it's way to JNMC road, Ramdev circle and Kolhapur circle to college."ರಚನಾತ್ಮಕ ಪಾಠಯೋಜನೆ ಕುರಿತು ಕಾರ್ಯಗಾರ ಹಾಗೂ ಸಂಪನ್ಮೂಲ ಶಿಕ್ಷಕರಿಂದ ಪ್ರಾತ್ಯಕ್ಷಿಕೆ ಪಾಠಬೋಧನೆ ಕಾರ್ಯಕ್ರಮ"

ಕನಕದಾಸ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದ IQAC ಅಡಿಯಲ್ಲಿ  ಬೆಳಗಾವಿ ನಗರ ಕ್ಷೇತ್ರ ಸಂಪನ್ಮೂಲ (BRC)ಕೇಂದ್ರದ ಸಹಯೋಗದಲ್ಲಿ  ಪ್ರತಿವರ್ಷದಂತೆ ದಿನಾಂಕ 27-01-2021 ರಿಂದ 30-012021ರ ವರೆಗೆ ಬಿ.ಇಡಿ.ಪ್ರಶಿಕ್ಷಣಾರ್ಥಿಗಳಿಗೆ "5 E' ಗಳ ಆಧಾರದ "ರಚನಾತ್ಮಕ ಪಾಠಯೋಜನೆ ಕುರಿತು ಕಾರ್ಯಗಾರ ಹಾಗೂ ಸಂಪನ್ಮೂಲ ಶಿಕ್ಷಕರಿಂದ ಪ್ರಾತ್ಯಕ್ಷಿಕೆ ಪಾಠಬೋಧನೆ ಕಾರ್ಯಕ್ರಮ" ಜರುಗಿತು. ಬೆಳಗಾವಿ ನಗರ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳಾದ ಶ್ರೀ ರಾಜಶೇಖರ ಚಳಗೇರಿ ಇವರ ಮಾರ್ಗದರ್ಶನ ಹಾಗೂ ನಿಯೋಜನೆ ಮೇರೆಗೆ ಸಂಪನ್ಮೂಲ ಶಿಕ್ಷಕರಾಗಿ ಶ್ರೀ ಎಸ್.ಪಿ.ವಾಲಿ, ಶ್ರೀ ರಾಜಶೇಖರ ನೇಗಿನಹಾಳ, ಶ್ರೀ ಕೆ.ಎಸ್.ಅಷ್ಠಗಿ, ಶ್ರೀ ಗಸ್ತಿ, ಶ್ರೀ ಅನಿಲ್ ಜಿ.ಮಾದನಭಾವಿ ಮತ್ತು ಶ್ರೀಮತಿ ಮಗದುಮ್ ಇವರುಗಳು ಆಗಮಿಸಿ ರಚನಾತ್ಮಕ ಪಾಠಯೋಜನೆಯ ಕ್ರಮ, ಬೋಧನೆ,ಮಹತ್ವ ಕುರಿತು ಮಾಹಿತಿ ಹಾಗೂ ವಿವಿಧ ವಿಷಯಗಳಲ್ಲಿ ಪ್ರಾತ್ಯಕ್ಷಿಕೆ ಪಾಠಬೋಧನೆ ಮಾಡಿದರು.ಗಣ್ಯರಿಂದ ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವು ಉದ್ಘಾಟನೆಯಾಯಿತು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರು ವಹಿಸಿದ್ದರು.ಕಾರ್ಯಾಗಾರದಲ್ಲಿ ಪ್ರಾಧ್ಯಾಪಕರು ಹಾಗೂ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.ಪ್ರಾತ್ಯಕ್ಷಿಕೆ ಪಾಠಬೋಧನೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು."ರಾಷ್ಟ್ರೀಯ ಹುತಾತ್ಮ ದಿನಾಚರಣೆ"

ಕನಕದಾಸ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 73 ನೇ  ಪುಣ್ಯಸ್ಮರಣೆ ನಿಮಿತ್ತ "ರಾಷ್ಟ್ರೀಯ ಹುತಾತ್ಮ ದಿನಾಚರಣೆ" ಪ್ರಯುಕ್ತ ಪೂಜೆ ಸಲ್ಲಿಸಿ 'ಮೌನಾಚರಣೆ' ಕಾರ್ಯಕ್ರಮ ಜರುಗಿತು.ನಿಕಟ ಸೇವಾ ತರಬೇತಿಗಾಗಿ ನಮ್ಮ ಮಹಾವಿದ್ಯಾಲಯಕ್ಕೆ M.Ed.ಪ್ರಶಿಕ್ಷಣಾರ್ಥಿಗಳೊಂದಿಗೆ  ಆಗಮಿಸಿದ ಸಹಾಯಕ ಪ್ರಾಧ್ಯಾಪಕರಾದ  ಡಾ.ಎ.ವಿ.ಕರಬಸನಗೌಡ , ಕಾಲೇಜಿನ ಪ್ರಾಚಾರ್ಯರು, ಪ್ರಾಧ್ಯಾಪಕರು, ಪ್ರಶಿಕ್ಷಣಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು."ರಾಷ್ಟ್ರೀಯ ಪರಾಕ್ರಮ ದಿನಾಚರಣೆ"

ಕನಕದಾಸ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ದೇಶಭಕ್ತ, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ರ ವಿರುದ್ಧ ಹೋರಾಡಲು ಭಾರತೀಯ ಸೇನೆಯನ್ನು ಕಟ್ಟಿ ಬೆಳೆಸಿದ ಅಪ್ಪಟ ರಾಷ್ಟ್ರಪ್ರೇಮಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮಜಯಂತಿ ನಿಮಿತ್ತ "ರಾಷ್ಟ್ರೀಯ ಪರಾಕ್ರಮ ದಿನಾಚರಣೆ" ಸಮಾರಂಭ ಜರುಗಿತು.ಮುಖ್ಯ ಅತಿಥಿಗಳಾಗಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ದ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಕೆ.ಆರ್.ಪೂಜಾರ ಆಗಮಿಸಿ ಮಾತನಾಡಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜೀವನ ಚರಿತ್ರೆ ಹಾಗೂ ಅವರು ಪ್ರತಿಷ್ಠಿತ ಆಯ್.ಸಿ.ಎಸ್. ಹುದ್ದೆ ತ್ಯಜಿಸಿ ಇಚ್ಛಾಶಕ್ತಿಯಿಂದ ರಾಜಕೀಯ ಪ್ರವೇಶ ಮಾಡಿ ಸ್ವಾತಂತ್ರ್ಯ ಹೋರಾಟಕ್ಕೆ ತೀವ್ರತೆ ತಂದುಕೊಟ್ಟ ಉಗ್ರಗಾಮಿ ಪಂಗಡದ ಮುಂಚೂಣಿ ನಾಯಕನಾದ ಬಗೆಯನ್ನು ತಿಳಿಸಿದರು.ಕಾರ್ಯಕ್ರಮವು ಪ್ರಶಿಕ್ಷಣಾರ್ಥಿ ಶೀತಲ್ ಪಾಟೀಲ್ ಹಾಗೂ ಸಂಗಡಿಗರ ಪ್ರಾರ್ಥನೆ ಗೀತೆಯೊಂದಿಗೆ ಆರಂಭವಾಯಿತು, ಪ್ರಶಿಕ್ಷಣಾರ್ಥಿ ರೋಹಿಣಿ ತಹಶೀಲ್ದಾರ್ ಸರ್ವರನ್ನೂ ಸ್ವಾಗತಿಸಿದರು, ಕಾಲೇಜಿನ ವಿದ್ಯಾರ್ಥಿ ಪರಿಷತ್ತಿನ ಉಪಾಧ್ಯಕ್ಷರಾದ ಡಾ.ಎಂ.ಪಿ.ಚಳಗೇರಿ ಅತಿಥಿಗಳ ಪರಿಚಯ ಮಾಡಿದರು.ಕಾರ್ಯಕ್ರಮದಲ್ಲಿ ಎಲ್ಲ ಪ್ರಾಧ್ಯಾಪಕರು, ಪ್ರಶಿಕ್ಷಣಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು, ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ.ಎ.ಎಲ್.ಪಾಟೀಲ ಇವರು ವಹಿಸಿದ್ದರು. ಕೊನೆಯಲ್ಲಿ ಪ್ರಶಿಕ್ಷಣಾರ್ಥಿಗಳಾದ ಗಂಗಾರಾಂ ಮಿಸಾಳೆ ವಂದಿಸಿದರು, ಶ್ರುತಿ ಜನೈಗೋಳ ಕಾರ್ಯಕ್ರಮ ನಿರೂಪಿಸಿದರು."72 ನೆಯ ಗಣರಾಜ್ಯೋತ್ಸವ ದಿನಾಚರಣೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುಣ್ಯ ಸ್ಮರಣೆ ಸಮಾರಂಭ"

ಕನಕದಾಸ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು  "72 ನೆಯ ಗಣರಾಜ್ಯೋತ್ಸವ ದಿನಾಚರಣೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುಣ್ಯ ಸ್ಮರಣೆ ಸಮಾರಂಭ" ಜರುಗಿತು.ಕಾಲೇಜಿನ ಪ್ರಾಚಾರ್ಯರಾದ ಡಾ.ಎ.ಎಲ್.ಪಾಟೀಲ ಇವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ ದೇಶದ ಗಣತಂತ್ರ ವ್ಯವಸ್ಥೆ ಹಾಗೂ  ಸಂವಿಧಾನ ರಚನಾ ಕರ್ತೃ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಧನೆ ಮತ್ತು ಬ್ರಿಟಿಷ್ ಆಡಳಿತ ಅವಧಿಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜೀವನ ಸಾಧನೆ ಕುರಿತು ಮಾತನಾಡಿದರು. ಕಾರ್ಯಕ್ರಮವು ಸ್ವಾತಂತ್ರ್ಯ ಹೋರಾಟಗಾರರೂ, ಮಾಜಿ ವಿಧಾನ ಪರಿಷತ್ ಸದಸ್ಯರೂ ಆಗಿದ್ದ ದಿವಂಗತ ಗವಿಸಿದ್ದಪ್ಪ ಬೆಳವಡಿ ಅಜ್ಜನವರ ಭಾವ ಮೂರ್ತಿಗೆ ಪೂಜೆ ಸಲ್ಲಿಸುವುದರ ಮೂಲಕ ಆರಂಭವಾಯಿತು. ಉಪಪ್ರಾಚಾರ್ಯರಾದ ಡಾ.ಬಿ.ಜಿ.ಧಾರವಾಡ ಹಾಗೂ NAAC & IQAC ಸಂಯೋಜಕರಾದ ಡಾ.ಎಸ್.ಎ.ನರಸಗೌಡಾ ಇವರು ಗಣರಾಜ್ಯೋತ್ಸವ  ಹಾಗೂ ಸಂಸ್ಮರಣೆ ದಿನ ಕುರಿತು ಮಾತನಾಡಿದರು.ಕಾರ್ಯಕ್ರಮದಲ್ಲಿ ಅಂಗಸಂಸ್ಥೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸತಿ ಪ್ರೌಢಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀ.ಬಿ.ಪಿ.ಲಮಾಣಿ , ಪ್ರಾಧ್ಯಾಪಕರು,ಶಿಕ್ಷಕ ವ್ರಂದ , ಪ್ರಶಿಕ್ಷಣಾರ್ಥಿಗಳು, ಶಾಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು."ರಾಷ್ಟ್ರೀಯ ಯುವ ದಿನೋತ್ಸವ"

ಕನಕದಾಸ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ವೀರ ಸನ್ಯಾಸಿ,ಯುಗ ಪ್ರವರ್ತಕ, ಭಾರತೀಯತೆಯನ್ನು  ಆಧ್ಯಾತ್ಮಿಕವಾಗಿ ಜಾಗತಿಕ ಮಟ್ಟದಲ್ಲಿ ಪಸರಿಸಿ ,ಚಿಕ್ಯಾಗೋದ  ಧರ್ಮಸಮ್ಮೇಳನದಲ್ಲಿ ತಮ್ಮ ಭಾಷಣದ ಮೂಲಕ ಸಂಚಲನವನ್ನು ಉಂಟು ಮಾಡಿ ಸನಾತನ ಹಿಂದೂ ಧರ್ಮವನ್ನು ಪ್ರತಿಪಾದಿಸಿದ  ಸ್ವಾಮಿ  ವಿವೇಕಾನಂದರ 158 ನೇ ಜನ್ಮದಿನಾಚರಣೆ ನಿಮಿತ್ತ "ರಾಷ್ಟ್ರೀಯ ಯುವ ದಿನೋತ್ಸವ" ಸಮಾರಂಭ ಜರುಗಿತು.ಮುಖ್ಯ ಅತಿಥಿಗಳಾಗಿ ಆಗಮಿಸಿ ಪ್ರಧಾನ ಭಾಷಣ ಮಾಡಿದ ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮದ ಪರಮ ಪೂಜ್ಯ ಶ್ರೀ. ಮೋಕ್ಷಾತ್ಮಾನಂದಜಿ  ಮಹಾರಾಜ ಇವರು ಮಾತನಾಡಿ ಜಗತ್ತಿಗೆ ಶಾಂತಿ ಮಂತ್ರವನ್ನು ಆಧ್ಯಾತ್ಮಿಕ ನೆಲೆಯಲ್ಲಿ ಪ್ರತಿಪಾದಿಸಿದ ಸ್ವಾಮಿ ವಿವೇಕಾನಂದರು ಅಖಂಡ ಭಾರತ ನನ್ನ ಆತ್ಮವಾಗಿದೆ,ಭಾರತ ಧರ್ಮವನ್ನು ಸದಾ ಮಿಡಿಯುತ್ತಿದೆ ,ಅದು ದೇಶದ ಪ್ರತಿಯೊಬ್ಬ ಭಾರತೀಯನಲ್ಲೂ ಹಾಸುಹೊಕ್ಕಾಗಿ ನೆಲೆಯೂರಬೇಕೆಂದು ಬಯಸುತ್ತಿದೆ ಎಂದು ತಿಳಿಸಿ ಇಡೀ ಜಗತ್ತಿಗೆ ಭಾರತವು ಇಂದು ಆಧ್ಯಾತ್ಮಿಕ ಗುರುವಾಗಿ ಗೋಚರಿಸುತ್ತಿದೆ, ಅದಕ್ಕಾಗಿ ನಾವು ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ಹಾಗೂ ಅವರ  ವಿಚಾರಧಾರೆಗಳನ್ನು ನಿತ್ಯ ಓದಬೇಕು , ಅವರನ್ನು ನೋಡುವುದೇ ಒಂದು ಸಂಚಲನ, ಪುಳಕವನ್ನುಂಟು ಮಾಡುತ್ತದೆ,ಅವರೊಬ್ಬ ಮಹಾನ್ ಗ್ರಂಥವೇ ಆಗಿದ್ದಾರೆ ಎಂದು ಮಾತನಾಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ.ಎ.ಎಲ್.ಪಾಟೀಲ ಇವರು ವಹಿಸಿದ್ದರು.ಕಾರ್ಯಕ್ರಮವು ಪ್ರಶಿಕ್ಷಣಾರ್ಥಿ ಅನಿತಾ ಬನಪ್ಪಗೋಳ ಪ್ರಾರ್ಥನೆಯೊಂದಿಗೆ ಆರಂಭವಾಯಿತು.ಪ್ರಶಿಕ್ಷಣಾರ್ಥಿ ಸವಿತಾ ಸನದಿ ಸರ್ವರನ್ನೂ ಸ್ವಾಗತಿಸಿದರು.ಉಪಪ್ರಾಚಾರ್ಯರಾದ ಡಾ.ಬಿ.ಜಿ.ಧಾರವಾಡ ಪರಮ ಪೂಜ್ಯ ಶ್ರೀಗಳನ್ನು ಪರಿಚಯಿಸಿದರು.ಸಹಾಯಕ ಪ್ರಾಧ್ಯಾಪಕರಾದ ಡಾ.ಎಂ.ಪಿ.ಚಳಗೇರಿ  ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಿಕ್ಷಣಾರ್ಥಿಗಳಾದ ಸಾಗರ ಶಿವಕ್ಕನವರ,ಗಾಯತ್ರಿ ಮುನೋಳಿ, ಅಂಜುಮ್ ಮುಜಾವರ ಹಾಗೂ ಸಂಗಡಿಗರಿಂದ ಸ್ವಾಮಿ ವಿವೇಕಾನಂದರನ್ನು ಕುರಿತು ನಾಟಕಾಭಿನಯ ಹಾಗೂ ಭಾಷಣ ಕಾರ್ಯಕ್ರಮ ನಡೆಯಿತು.ಈ ಪ್ರಯುಕ್ತ ಪ್ರಶಿಕ್ಷಣಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು, ವಿಜೇತರಿಗೆ ಬಹುಮಾನ-ಪ್ರಶಸ್ತಿ ಪತ್ರ ವಿತರಿಸಲಾಯಿತು.ಸಮಾರಂಭದಲ್ಲಿ ಪ್ರಾಧ್ಯಾಪಕರಾದ ಪ್ರೊ.ಎಸ್.ಎಸ್.ಬಡಿಗೇರ,NAAC & IQAC ಸಂಯೋಜಕರಾದ ಡಾ.ಎಸ್.ಎ.ನರಸಗೌಡ, ವಿದ್ಯಾರ್ಥಿ ಪರಿಷತ್ ಅಧ್ಯಕ್ಷರಾದ ಡಾ.ಜಿ.ಆರ್.ಕೋಟೆಣ್ಣವರ ಹಾಗೂ ಎಲ್ಲ ಪ್ರಾಧ್ಯಾಪಕರು, ಪ್ರಶಿಕ್ಷಣಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.ಕೊನೆಯಲ್ಲಿ ಪ್ರಶಿಕ್ಷಣಾರ್ಥಿಗಳಾದ ಮೇಘಾ ಬೇವಿನಕೊಪ್ಪಮಠ ವಂದಿಸಿದರು,ಸವಿತಾ ಖನಗಾವಿ ಕಾರ್ಯಕ್ರಮ ನಿರೂಪಿಸಿದರು.ಕನಕದಾಸ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ "ಭಾರತದ ಮೊದಲ ಮಹಿಳಾ ಶಿಕ್ಷಕಿ, ಅಕ್ಷರ ಕ್ರಾಂತಿಯ ಕಿಡಿಯನ್ನು ಹೊತ್ತಿಸಿದ ಅಕ್ಷರದ ಅವ್ವ , ಮಹಿಳೆಯರ ಧ್ವನಿಯಾಗಿ ಮಹಿಳಾ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿ , ಮಹಿಳೆಯರ ಶಿಕ್ಷಣದ ಮಹತ್ವವನ್ನು ಪ್ರತಿಪಾದಿಸಿದ ಸಮಾಜ ಸುಧಾರಕಿ "ಶ್ರೀಮತಿ ಸಾವಿತ್ರಿ ಬಾಯಿ ಫುಲೆ" ಅವರ 190 ನೇ ಜನ್ಮದಿನಾಚರಣೆ ಸಮಾರಂಭ ಜರುಗಿತು.ಪ್ರಶಿಕ್ಷಣಾರ್ಥಿಗಳು ಶ್ರೀಮತಿ ಸಾವಿತ್ರಿ ಬಾಯಿ ಫುಲೆ ಅವರ ಜೀವನ ಚರಿತ್ರೆಯನ್ನು ಸಾರುವ ನಾಟಕಾಭಿನಯ ಪ್ರಸ್ತುತ ಪಡಿಸಿದರು.ಪ್ರಾದ್ಯಾಪಕರು ಹಾಗೂ ಪ್ರಶಿಕ್ಷಣಾರ್ಥಿಗಳು "ಫುಲೆ ದಂಪತಿಗಳ ವ್ಯಕ್ತಿತ್ವ ಹಾಗೂ ಸಾಧನೆ" ಕುರಿತು ಮಾತನಾಡಿದರು.ಈ ಕುರಿತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಪ್ರಾಚಾರ್ಯರಾದ ಡಾ.ಎ.ಎಲ್.ಪಾಟೀಲ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು."ಹೊಸ ವರ್ಷದ ಸ್ವಾಗತ ಸಂಭ್ರಮ ಹಾಗೂ 2020 ವರ್ಷಕ್ಕೆ ವಿದಾಯ ಹೇಳುವ ಸಮಾರಂಭ"

ಕನಕದಾಸ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ದಿನಾಂಕ 01-01-2021 ರಂದು "ಹೊಸ ವರ್ಷದ ಸ್ವಾಗತ ಸಂಭ್ರಮ ಹಾಗೂ 2020 ವರ್ಷಕ್ಕೆ ವಿದಾಯ ಹೇಳುವ ಸಮಾರಂಭ" ಜರುಗಿತು.ಪ್ರಶಿಕ್ಷಣಾರ್ಥಿಗಳು ಹಾಗೂ ಪ್ರಾಧ್ಯಾಪಕರು ಆತಂಕದ ಕ್ಷಣಗಳನ್ನು ಅನುಭವಿಸಿ , ಜಯಿಸಿ ಪಾಠ ಕಲಿಸಿದ ಕಳೆದ ವರ್ಷದ ಹಿನ್ನೋಟ  ಹಾಗೂ ಹೊಸ ವರ್ಷದಲ್ಲಿ ಜೀವನ ಕ್ರಮಕ್ಕೆ  ಜಾಗ್ರತಿ , ಅರಿವಿನ ಸಂದೇಶ ಸಾರುವ ಚಿಂತನ-ಮಂಥನಗಳ  ಮುನ್ನೋಟದ ಕುರಿತು ಮಾತನಾಡಿದರು.ಪ್ರಾಚಾರ್ಯರಾದ ಡಾ.ಎ.ಎಲ್.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಎಲ್ಲ ಪ್ರಾಧ್ಯಾಪಕರು, ಪ್ರಶಿಕ್ಷಣಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.ವಿಶ್ವಮಾನವ ದಿನಾಚರಣೆ

ಕನಕದಾಸ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ದಿನಾಂಕ 29-12-2020 ರಂದು ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ರಾಷ್ಟ್ರಕವಿ, ಕರ್ನಾಟಕ ರತ್ನ, ಅಲ್ಲದೇ ಹಲವಾರು ಪ್ರಶಸ್ತಿ ಹಾಗೂ ಪುರಸ್ಕಾರಗಳಿಗೆ ಭಾಜನರಾದ ಮನುಜಮತ ವಿಶ್ವಪಥ ವೆಂದು "ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ ಕನ್ನಡವೇ ನಿತ್ಯ" ಎಂದು ಸಾರಿದ ವಿಶ್ವಮಾನವ ಸಂದೇಶದ ಕನ್ನಡ ಸಾರಸ್ವತ ಲೋಕದ ಕವಿ, ಕಾದಂಬರಿಕಾರ, ಅದ್ಬುತ ಮಹಾಕಾವ್ಯದ ಸಾಹಿತಿ" ಕುವೆಂಪು" ಅವರ ಜನ್ಮದಿನದ ನಿಮಿತ್ತ "ವಿಶ್ವಮಾನವ ದಿನಾಚರಣೆ"ಯ ಸಮಾರಂಭ ಜರುಗಿತು.ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ.ಎ.ಎಲ್.ಪಾಟೀಲ ಇವರು ವಹಿಸಿದ್ದರು.ಪ್ರಶಿಕ್ಷಣಾರ್ಥಿಗಳು ಕುವೆಂಪು ಅವರು ರಚಿಸಿದ ಗೀತೆ ಗಾಯನ ಪ್ರಸ್ತುತ ಪಡಿಸಿದರು. ಪ್ರಾದ್ಯಾಪಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
Celebration of Birth Anniversary of Indian legendary and great mathematician "Shri.Srinivasa Ramanujan" on the occasion of "National Mathematics Day"

Kanakadasa Shikshana Samiti's Krantiveer Sangolli Rayanna College of Education, Belagavi : IQAC Organises today Celebration of Birth Anniversary of Indian legendary and great mathematician "Shri.Srinivasa Ramanujan" on the occasion of "National Mathematics Day", Principal presided over the function and all the faculty , Students were presented on the occasion.
"ಮತದಾರರ ಜಾಗೃತಿ ವೇದಿಕೆ(Voters Awareness Forum-VAF) ಹಾಗೂ ಮತದಾರರ ಸಾಕ್ಷರತಾ ಸಂಘದ"

ಕನಕದಾಸ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದ IQAC ಸಹಯೋಗದಲ್ಲಿ ಕಾಲೇಜಿನ "ಮತದಾರರ ಜಾಗೃತಿ ವೇದಿಕೆ(Voters Awareness Forum-VAF) ಹಾಗೂ ಮತದಾರರ ಸಾಕ್ಷರತಾ ಸಂಘದ"(Electoral Literacy Club-ELC) ಅಡಿಯಲ್ಲಿ ಪ್ರಶಿಕ್ಷಣಾರ್ಥಿಗಳಿಗಾಗಿ "ಮತದಾರ,ಮತದಾನ ಹಾಗೂ ಚುನಾವಣೆ"ಸಂಬಂಧದ ಭಿತ್ತಿಪತ್ರ ತಯಾರಿಕೆ, ಪ್ರಬಂಧ ಹಾಗೂ ರಸಪ್ರಶ್ನೆ ಸ್ಪರ್ಧೆಯ ಕಾರ್ಯಕ್ರಮಗಳನ್ನು ಪ್ರಾಚಾರ್ಯರ ನಿರ್ದೇಶನದಲ್ಲಿ ಪ್ರಾದ್ಯಾಪಕರಾದ ಡಾ.ಎನ್.ಎಸ್.ಜಾಧವ ಹಾಗೂ ಡಾ.ಎಂ. ಆರ್.ಭಟ್ಟ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿತ್ತು.Covid-19 Test for Faculty & Students

Kanakadasa Shikshana Samiti's Krantiveer Sangolli Rayanna College of Education Belagavi Under IQAC & College Red Cross Unit We are Organized Covid-19 Test for Faculty & Students in our college on 26 & 27-11-2020 As for the direction of Government of Karnataka  and  R.C.U.Belagavi Today.
ಬಡವರ ಬಂಧು, ದೀನ ದಲಿತರ ಉದ್ಧಾರಕರು, ಹಿಂದುಳಿದ ಜನಾಂಗಗಳ ಬಗೆಗೆ ಅಪಾರ ಕಾಳಜಿಯ, ಬೆಳಗಾವಿ, ಹುಬ್ಬಳ್ಳಿ- ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ 68 ಕ್ಕಿಂತ ಹೆಚ್ಚು ಶಿಕ್ಷಣ ಸಂಸ್ಥೆಗಳ ಸ್ಥಾಪನೆಯ ರೂವಾರಿಗಳು, ರಾಜಕೀಯ ನೇತಾರರು, ಗೌರವ ಡಾಕ್ಟರೇಟ್ ಪುರಸ್ಕೃತ, ಕನಕದಾಸ ಶಿಕ್ಷಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ನಮ್ಮೆಲ್ಲರ ಹೆಮ್ಮೆಯ, ಸ್ಪೂರ್ತಿದಾಯಕ ವ್ಯಕ್ತಿತ್ವದ ಶಿಕ್ಷಣ ಪ್ರೇಮಿಗಳಾದ ಮಾನ್ಯ ಡಾ.ಬಿ.ಎಫ್.ದಂಡಿನ ಸರ್ ಇವರು ಪ್ರಸ್ತುತ ಸಾಲಿನ ಕರ್ನಾಟಕ ಸರ್ಕಾರದ ಅತ್ಯುನ್ನತ ಪ್ರಶಸ್ತಿ "ಕನ್ನಡ ರಾಜ್ಯೋತ್ಸವ ಪ್ರಶಸ್ತಿ" ಗೆ ಭಾಜನರಾಗಿರುವುದಕ್ಕೆ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು, ಪ್ರಾದ್ಯಾಪಕರು, ಸಿಬ್ಬಂದಿ ಹಾಗೂ ಎಲ್ಲ ಪ್ರಶಿಕ್ಷಣಾರ್ಥಿಗಳಿಂದ ಅವರಿಗೆ ನಮ್ಮ ಸಂಸ್ಥೆ, ನಮ್ಮ ಹೆಮ್ಮೆಯ ಮಾನ್ಯರಿಗೆ ಹಾರ್ದಿಕ ಅಭಿನಂದನೆಗಳು.ಕನಕದಾಸ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಗಳ ಸಂಯುಕ್ತಾಶ್ರಯದಲ್ಲಿ ಇಂದು 65 ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.ಕನ್ನಡ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ನಾಡಗೀತೆ ಹಾಗೂ ರಾಷ್ಟ್ರ ಗೀತೆ ಮೂಲಕ ಗೌರವ ವಂದನೆ ಸಲ್ಲಿಸಲಾಯಿತು.ಪ್ರಾರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮಾಜಿ ವಿಧಾನ ಪರಿಷತ್ ಸದಸ್ಯರೂ ಆಗಿದ್ದ ದಿವಂಗತ ಗವಿಸಿದ್ದಪ್ಪ ಬೆಳವಡಿ ಅಜ್ಜನವರ ಭಾವಮೂರ್ತಿಗೆ ಪೂಜೆ ನೆರವೇರಿತು.ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ.ಎ.ಎಲ್.ಪಾಟೀಲ ಪ್ರಾಧ್ಯಾಪಕರು, ಪ್ರೌಢಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು."Maharshi Valmiki Jayanti And Birth Anniversary of Shri Sardar Vallabhbhai Patel"

Today We are organised "Maharshi Valmiki Jayanti  And Birth Anniversary of Freedom fighter, Iron man, First home minister of Independent India "Bharat Ratna" 'Shri Sardar Vallabhbhai Patel' on the occasion of National Unity Day" And We took the Oath of Rashtriya Ekta Divas Pledge. Principal Dr. A. L. Patil And Faculty were presence on the occasion.ಕನಕದಾಸ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ದಿನಾಂಕ 30-08-2020 ರಂದು, ಹೆಮ್ಮೆಯ ಹಾಗೂ ನಮಗೆಲ್ಲರಿಗೂ ಪ್ರೇರಣೆಯ ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ವಿಧಾನ ಪರಿಷತ್ ಸದಸ್ಯರು, ಶಿಕ್ಷಣ ಪ್ರೇಮಿಗಳು ,ಹಲವು ಸಂಸ್ಥೆಗಳ ಸ್ಥಾಪನೆಗೆ ಕಾರಣೀ ಕರ್ತರು ಹಾಗೂ ಬಡವರ- ದೀನದಲಿತರ , ಹಿಂದುಳಿದ ವರ್ಗಗಳ ಸಮಾಜದ ಕಣ್ಮಣಿ ದಿವಂಗತ ಗವಿಸಿದ್ದಪ್ಪ ಬೆಳವಡಿ ಅಜ್ಜನವರ 108 ನೇ ಜನ್ಮದಿನಾಚರಣೆ ನಿಮಿತ್ತ ಪೂಜ್ಯರ ಭಾವಪ್ರತಿಮೆಗೆ ಪೂಜಾ ಕಾರ್ಯಕ್ರಮ ನೆರವೇರಿಸಿ ಗೌರವ ಸಲ್ಲಿಸಲಾಯಿತು.ಸಮಾರಂಭದಲ್ಲಿ ಪ್ರಾಚಾರ್ಯರಾದ ಡಾ.ಏ.ಎಲ್.ಪಾಟೀಲ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸತಿ ಮಾಧ್ಯಮಿಕ ಶಾಲೆಯ ಮುಖ್ಯೋಪಾದ್ಯಾಯರಾದ ಶ್ರಿ.ಬಿ.ಪಿ.ಲಮಾಣಿ, ಶ್ರೀ.ಆರ್.ಪಿ.ಪಮ್ಮಾರ ಕಾಲೇಜಿನ ಪ್ರಾಧ್ಯಾಪಕರು,ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು."74 th Independence Day" Celebration

Kanakadasa Shikshan Samiti's Krantiveer Sangolli Rayanna College of Education Belagavi: Today we are celebrated "74 th Independence Day" at our college campus, beginning we are honoured with worshiped of freedom fighter & Ex. MLC of our honourable Shri Gavisiddhappa Belavadi on the occasion.And after flag hoisting by Principal Dr.A.L.Patil .Shri B.P.Lamani Head Master of K.S.R.Highschool Belagavi. All the Faculty of B.Ed college and High School were presented on the occasion."Felicitation to Corona Warriors"

Kanakadas Shikshan Samiti's Krantiveer Sangolli Rayanna College of Education Belagavi: Under NSS Unit ,IQAC & Indian Red Cross Society District Branch Belagavi , Celebration on the occasion of Centenary Year Of Indian Red Cross Society,(1920-2020) "Felicitation to Corona Warriors" Chief guests of today's Programme Shri Ashok Badami Chairman IRC Belagavi , Dr D.N.Misale secretary of IRC Belagavi , Chaired by Principal Dr A.L.Patil , Programme started with prayer song by Shri Krishna Gumaste ,FPAI coordinator Belagavi, Welcome & Introduction by Dr.B.G.Dharwad Coordinator of College YRCS.45 members of #Corona_Warriors from various NGOs and various organizations in the district were honored.Some of them were shared experiences during Lockdown. Finally given vote of thanks by Students council chairperson Dr.G.R.Kotennavar , Anchored by IQAC/NAAC coordinator Dr.S.A.Narasgouda, NSS unit coordinator Prof.S.S.Bsdiger&all the Teaching faculty were presence.Online speech on "Adolescents Education,Child marriages and Bio-Gender Violence"

Kanakadasa Shikshan Samiti's Krantiveer Sangolli Rayanna College of Education Belagavi ,IQAC initiatives in Association with FPAI Belagavi Branch, Today (27-07-2020) Organized Online speech on "Adolescents Education,Child marriages and Bio-Gender Violence". Resource Person of today's Programme FPAI Belagavi Branch Programme officer Shri. Krishna Gumaste.Vice Principal Dr.B.G.Dharwad presided over the function, welcomed by Student's council Deputy Chairman Dr.M.P.Chalageri , Anchoured by IQAC Coordinator Dr.S.A.Narasgouda and lastly given a vote of thanks by Dr.G.R.Kotennavar.All the staff and students were presented on the occasion."Yoga at Home with Family”

On 21/06/2020 online Programme on Celebration of “World Yoga Day” was organised on this occasion making different types Yoga Demonstrated by Dr. M. R. Bhat Asst. Prof. & Student Trainee Sarojini Hamsanur.
"Awareness Programme on Online Celebration of "Mask Day"

As per the direction of RCU Belagavi, Our college IQAC & NSS Unit Organized Awareness Programme on Online Celebration of “Mask Day”.
Due to the Covid-19, Corona Virus Pandemic, by the Directions of Rani Channamma University Belagavi for taking B.Ed. Course online classes for next Semesters (4th & 2nd), we started Online Classes successfully with the support of our Management as per the prescribed time table and instructions given by our Principal according to the Syllabus from the date 20-04-2020 onwards regularly. With interest & well preparations, online classes are given by all the Teaching Faculty. The students response & feedback is good with better attendance.

Krantiveer Sangolli Rayanna College of Education

This college, bearing the name of the great revolutionary patriot, “Sangolli Rayanna” was started in the year 1982 & was affiliated to Karnataka University, Dharwad till the academic year 2009 -10. From the academic year 2010 – 11 onwards the college is affiliated to Rani Chennamma University, Bhutaramanhatti, Belagavi. It is recognized by N.C.T.E & Govt. of Karnataka & also included under Section 2(F) & 12(B) of UGC Act 1956 in the year 2003. From 19th May 2009 it is included in Government Grant in Aid. The college has successfully completed 35 Years & more than 3500 trained graduates have successfully come out of this college & are servicing in different capacities all over the country. In 2013 IGNOU study centre has been established in the college.

Krantiveer Sangolli Rayanna College of Education, bearing the name of the great revolutionary patriot, “Sangolli Rayanna” was established by Kanakadas Shikshan Samiti, Gadag, in the year 1982 with the inspiration of Honorable Shri Gavisiddappa Belawadi Ex.M.L.C. of Bombay Karnataka who was one of the directors of the Samiti for the noble cause of education. Under the dynamic leadership of its Founder President Dr. B. F. Dandin and Secretary Shri. Ravi B. Dandin, the College has grown up to be one of the prestigious college of education in the northern part of Karnataka.

College Glance